Slider

ಬಸ್ ಟಿಕೆಟ್ ಅಲ್ಲಿ ಕನ್ನಡ

ಯಲ್ಲಾಪುರದಲ್ಲಿ ಬಸ್ ಹತ್ತಿ ಟಿಕೆಟ್ ತೆಗೆದು ಕೊಂಡೆ. ಆಗ ಸುಮ್ಮನೆ ಟಿಕೆಟ್ ಗಮನಿಸಿದಾಗ ನನಗೆ ಆಶ್ಚರ್ಯ. ಯಾಕೆ ಹೀಗೆ ಅನ್ನುವ ಕುತೂಹಲ.ಈ ಟಿಕೆಟ್ ಒಮ್ಮೆ ಗಮನಿಸಿ. ಮೂರು ಕಾಸಿಗೆ ಪ್ರಯೋಜನ ಬಾರದ ವಿಷಯಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಪ್ರಯಾಣಿಕರಿಗೆ ನಿಜಕ್ಕೂ ಪ್ರಯೋಜನ ಆಗುವ ವಿಷಯ ಇಂಗ್ಲಿಷ್ ಅಲ್ಲಿವೆ.

ಇಂಗ್ಲಿಷ್ ಅಲ್ಲಿ ಏನಿವೆ?

  • ಎಲ್ಲಿಂದ ಎಲ್ಲಿಗೆ ಪ್ರಯಾಣ
  • ದೂರ
  • ಬಸ್ ಬಗೆ
  • ವರ್ಗಾವಣೆ ಸಾಧ್ಯ ಇಲ್ಲ ಅನ್ನುವ ಸೂಚನೆ
  • ಪೂರ್ತಿ ಅಥವಾ ಅರ್ಧ ಟಿಕೆಟ್ ಅನ್ನುವ ಮಾಹಿತಿ

ಕನ್ನಡದಲ್ಲಿ ಏನನ್ನು ಬರೆದಿದ್ದಾರೆ?

  • ವಾಕರಸಾಸಂ, ಹಳಿಯಾಳ
  • ಮೊತ್ತ ರೂ
  • ಮತದಾನ ನನ್ನ ಹಕ್ಕು. ಅದನ್ನು ನಾನು ಚಲಾಯಿಸುವೆ.

ಪ್ರಾಮಾಣಿಕತೆಯಿಂದ ಒಮ್ಮೆ ಕೂಲಂಕಶವಾಗಿ ಗಮನಿಸಿ. ಕನ್ನಡದಲ್ಲಿ ಪ್ರಯಾಣಿಕರಿಗೆ ಕಿಂಚಿತ್ ಉಪಯೋಗಕ್ಕೆ ಬಾರದ ವಿಷಯ ,ಇಂಗ್ಲಿಷ್ ಅಲ್ಲಿ ಉಪಯುಕ್ತ ಮಾಹಿತಿ. ಇಂದು ಕನ್ನಡಿಗರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತಿರುವದಕ್ಕೆ ಬರಿ ಉನ್ನತ ಶಿಕ್ಷಣ ಮಾತ್ರ ಕಾರಣ ಅಲ್ಲ. ಕನ್ನಡದಲ್ಲಿ ಬೇಕಾದ ಮಾಹಿತಿ ನೀಡದಿರುವದು ಕಾರಣ.

ಕನ್ನಡದ ಬಳಸಲು ನಮಗಿರುವ ಅಡ್ಡಿ ಏನು ಎನ್ನುವ ಪ್ರಶ್ನೆ ನನ್ನನ್ನು ಕಾಡಿದೆ. ನಿಮಗೆ?

ವಿ.ಸೂ: ನವೆಂಬರ್ ೧೫ ೨೦೧೪ರಲ್ಲಿ ವಿಸ್ಮಯನಗರಿ.ಕಾಂ ಅಲ್ಲಿ ರಾಜೇಶ ಹೆಗಡೆಯ ಈ ಲೇಖನ ಪ್ರಕಟ ಆಗಿತ್ತು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ