Slider

ಬಿಎಂಟಿಸಿ ಬಸ್ ಮೇಲಿನ ಜಾಹೀರಾತಲ್ಲಿ ಕನ್ನಡದ ಕಣ್ಣಿಗೆ ಸುಣ್ಣ ಯಾಕೆ?

ಬೆಂಗಳೂರನಲ್ಲಿ ನಾನು ಬೈಕಲ್ಲಿ ಓಡಾಡುವಾಗ ಟ್ರಾಫಿಕ್ ಅಲ್ಲಿ ಕಾಯುತ್ತಿರುವಾಗ ನನ್ನ ಗಮನ ಸೆಳೆಯುವದು ಈ ಕನ್ನಡಕ್ಕೆ ದ್ರೋಹ ಬಗೆಯುವ ಬಿ.ಎಂ.ಟಿ.ಸಿ ಬಸ್ಸಿನ ಹಿಂದೆ ಹಾಕಿರುವ ಜಾಹೀರಾತುಗಳು. ಇಂಗ್ಲೀಷ್ ಅಲ್ಲಿ ಲೋಗೋ, ಮಾಹಿತಿ ಎಲ್ಲ ನೀಡುವ ಈ ಜಾಹೀರಾತುಗಳು ಕನ್ನಡದಲ್ಲಿ ಆ ಸಂದರ್ಭದಲ್ಲಿ ಅಗತ್ಯವೂ ಇಲ್ಲದ ಹಿತ ನುಡಿಗಳನ್ನು, ಸಾದಾ ಫಾಂಟಲ್ಲಿ ಕಂಪನಿ ಹೆಸರನ್ನು ಕನ್ನಡದಲ್ಲಿ ಬರೆದು ಮುಗಿಸುತ್ತಿವೆ.

ಜಾಹೀರಾತಲ್ಲಿ ಕನ್ನಡದಲ್ಲಿ ಬರೆಯುವ ಕೆಲವು ಗಾದೆ ಮಾತುಗಳು ಹೀಗಿವೆ.

ವಿದ್ಯಾ ದಾನ ಮಹಾ ದಾನ,

ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ,

ಗಿಡಮರ ಬೆಳೆಸಿ ಪರಿಸರ ಉಳಿಸಿ,

ಕೈ ಕೆಸರಾದರೆ ಬಾಯಿ ಮೊಸರು  

ನನ್ನ ಪ್ರಶ್ನೆ ಇಷ್ಟೇ. ಕನ್ನಡದಲ್ಲಿ ಜಾಹೀರಾತಿನ ಮಾಹಿತಿ ಬರೆಯುವದನ್ನು ಬಿಟ್ಟು ಇವುಗಳನ್ನು ಬರೆಯುವದು ಯಾಕೆ? ನಾವು ಮುಂದಿನ ಪೀಳಿಗೆಗೆ ಈ ಮೂಲಕ ಏನು ಸಂದೇಶ ಕೊಡ ಬಯಸುತ್ತೇವೆ? ಕನ್ನಡ ಕೇವಲ ಗಾದೆ ಮಾತು, ಸಾಹಿತ್ಯದ ಭಾಷೆ. ಇಂಗ್ಲೀಷ್ ಮಾಹಿತಿ ಭರಿತ ಭಾಷೆ ಎಂದೇ? 

ಪ್ರಾಮಾಣಿಕವಾಗಿ ವಿಚಾರ ಮಾಡಿ. ಈ ತರಹ ನಡವಳಿಕೆ ನಮ್ಮ ಕನ್ನಡವನ್ನು ಅಪ್ರಸ್ತುತ ಭಾಷೆಯಾಗಿ ಮಾಡುತ್ತದೆ. ಓದದಿದ್ದರೂ ಯಾವುದೇ ನಷ್ಟ ಇರದ ಮಾಹಿತಿ ಕನ್ನಡದಲ್ಲಿದೆ. ಇಂಗ್ಲೀಷ್ ಅಲ್ಲಿ ಮಾಹಿತಿಯ ಕಣಜವೇ ಈ ಜಾಹೀರಾತಲ್ಲಿದೆ.

ನಿಮ್ಮ ಅನಿಸಿಕೆ ಏನು? 

ಬೈಕ್ ಇಂದ ಮೊಬೈಲ್ ಅಲ್ಲಿ ತೆಗೆದ ಒಂದೆರಡು ಜಾಹೀರಾತಿನ ಸ್ಯಾಂಪಲ್ ನೀಡಿದ್ದೇನೆ.ಇಂತಹ ಹಲವಾರು ಜಾಹೀರಾತಿದೆ.

ರಾಜೇಶ ಹೆಗಡೆ ಅಗಸ್ಟ್ ೮ ೨೦೧೫ರಲ್ಲಿ ಈ ಲೇಖನವನ್ನು ವಿಸ್ಮಯಪತ್ರಿಕಾ.ಕಾಂ ಅಲ್ಲಿ ಬರೆದಿದ್ದರು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ